Surprise Me!

ಮಂಗಳೂರು: ಕಟೀಲು ದುರ್ಗಾ ಪರಮೇಶ್ವರಿಗೆ ಮತ್ತೆ ಅವಮಾನ | Oneindia Kannada

2017-11-02 4 Dailymotion

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಅವಹೇಳನ ಮಾಡಲಾಗಿದೆ...ಜಬ್ಬಾರ್ ಮಂಗಳೂರು ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶ್ರೀ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಸೇರಿದಂತೆ ಎಲ್ಲಾ ಹಿಂದೂ ದೇವಿ-ದೇವರುಗಳ ವಿರುದ್ಧ ಅತ್ಯಂತ ಕೀಳುಮಟ್ಟದ ಅಸಹ್ಯಕರ ಭಾಷೆ ಬಳಸಿ ಪೋಸ್ಟ್ ಗಳನ್ನು ಹಾಕಲಾಗಿದೆ..ಈ ಹಿನ್ನೆಲೆಯಲ್ಲಿ ಈ ಫೇಸ್‌ಬುಕ್‌ ಖಾತೆಯ ವಿರುದ್ಧ ಹಾಗು ಅದನ್ನು ನಿರ್ವಹಿಸುತ್ತಿರುವ ಜಬ್ಬಾರ್ ಮಂಗಳೂರು ಎಂಬ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆ ಜಬ್ಬಾರ್ ಬಿ.ಸಿ ರೋಡ್ ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗುತ್ತು. ಇದರಿಂದ ಕೆರಳಿದ್ದ ಹಿಂದೂ ಸಂಘಟನೆಗಳು ರಸ್ತೆಗಿಳಿದು ಹೋರಾಟ ನಡೆಸಿದ್ದವು. ಈ ಪ್ರಕರಣದ ವಿರುದ್ಧ ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಜಬ್ಬಾರ್ ಬಿ.ಸಿ ರೋಡ್ ಫೇಸ್‌ಬುಕ್‌ ಖಾತೆಯ ವಿರುದ್ಧ ತನಿಖೆ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಿದೀನ್ ಹಾಗೂ ಶಫಿ ಎಂಬುವವರನ್ನು ಬಂಧಿಸಲಾಗುತ್ತು. <br /> <br />Shri kshethra kateel Durgaparameshwari Devi has been repeatedly abused in the social networking site. In the Facebook account named Jabbar Mangalore, abused using the most disgusting language against all Hindu gods. <br />

Buy Now on CodeCanyon